Tuesday, October 12, 2010

ಸಾಮಗ್ರಿಗಳು : ಕಡ್ಲೆ ಹುಡಿ ...... 1 ಕಪ್
ಗೋಧಿ ಹುಡಿ ...... 1 ಕಪ್
ತುಪ್ಪ ...... 1 ಕಪ್
ಹಾಲು ..... 1 ಕಪ್
ಸಕ್ಕರೆ ...... 3 ಕಪ್
ನೆಲಗಡಲೆ .... ( ಹುರಿದು ಸಿಪ್ಪೆ ತೆಗೆದು ಅರ್ಧ ಬಾಗ ಮಾಡಿದ್ದು ) .. 1 ಕಪ್
ಕೋಕೋ ಹುಡಿ ..... 3 ಚಮಚ

ವಿಧಾನ :
ಕಡ್ಲೆ ಹುಡಿ ಮತ್ತು ಗೋಧಿ ಹುಡಿಗೆ ಎಲ್ಲಾ ತುಪ್ಪ ಸೇರಿಸಿ ಹಸಿ ವಾಸನೆ ಹೋಗುವಷ್ಟು ಹುರಿಯಿರಿ.
ದಪ್ಪ ತಳದ ಪಾತ್ರೆಗೆ ಸಕ್ಕರೆ, ಹಾಲು, ಸ್ವಲ್ಪ ನೀರು ಸೇರಿಸಿ ಕುಡಿಯಲು ಬಿಡಿ. ಒಂದೆಳೆ ಪಾಕವಾದಾಗ
ಹುರಿದಿಟ್ಟ ಮಿಶ್ರಣ ಸೇರಿಸಿ.
ಗಂಟಾಗದಂತೆ ಚೆನ್ನಾಗಿ ಮಗುಚಿ.ಇದರಲ್ಲಿ
ಕಾಲು ಭಾಗದಷ್ಟು ತೆಗೆದು ಬೇರೆ ಪಾತ್ರೆಗೆ ಹಾಕಿಡಿ. ಬದಿಯಿಂದ ಬಿಟ್ಟು ಕೊಂಡು ಬಂದಾಗ
ತುಪ್ಪ ಸವರಿದ ಬಟ್ಟಲಿಗೆ ಹಾಕಿ ಮೇಲ್ಬಾಗ ನಯವಾಗುವಂತೆ ಹರಗಿ. ಈಗ ತೆಗೆದಿರಿಸಿದ
ಕಾಲು ಭಾಗದಷ್ಟನ್ನು ಪುನ ಬಾಣಲೆಗೆ ಹಾಕಿ . ಅದಕ್ಕೆ ಕೋಕೋ ಪುಡಿ , ನೆಲಗಡಲೆ ಬೆರೆಸಿ.
ಒಲೆಯ ಮೇಲಿತ್ತು ಮಗುಚಿ ಬದಿಯಲ್ಲಿ ಬಿಟ್ಟುಕೊಂಡು ಬರುವಾಗ ಮೊದಲು ಹರವಿದ ತಟ್ಟೆಗೆ
ಅದರ ಮೇಲಿಂದ ಹಾಕಿ. ಚೆನ್ನಾಗಿ ಹರವಿ. ಸ್ವಲ್ಪ ತಣ್ಣಗಾದಾಗ ಬೇಕಾದ ಆಕಾರಕ್ಕೆ ಕತ್ತರಿಸಿ
..ರುಚಿಕರ ಚಾಕೋ ಬೇಸನ್ ಬರ್ಫಿ ಸಿದ್ಧ 

Sunday, October 10, 2010



ಫ್ರಿಜ್ ಕೇಕ್

ಸಾಮಗ್ರಿಗಳು:
ಬಿಸ್ಕೆಟ್ ಗಳು
ಬೆಣ್ಣೆ ..... ಆರು ದೊಡ್ಡ ಚಮಚ
ಸಕ್ಕರೆ.... ಒಂದು ಕಪ್
ವೆನಿಲ್ಲಾ ಎಸೆನ್ಸ್ .. ಎರಡು ಬಿಂದು
ಹಾಲು ....ನಾಲ್ಕು ಚಮಚ
ಒಣ ದ್ರಾಕ್ಷೆ, ಗೋಡಂಬಿ ಸ್ವಲ್ಪ
ಜಾಮ್ ಸ್ವಲ್ಪ
ವಿಧಾನ:
ಸಕ್ಕರೆಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ. ನಂತರ ಅದಕ್ಕೆ ಬೆಣ್ಣೆ,ಹಾಲು, ವೆನಿಲ್ಲಾ ಎಸೆನ್ಸ್ ಸೇರಿಸಿ ಪುನಃ ತಿರುಗಿಸಿ. ಒಂದು ಬೆಣ್ಣೆ ಸವರಿದ ತಟ್ಟೆಗೆ ಈ ಮಿಶ್ರಣದ ಸ್ವಲ್ಪ ಭಾಗವನ್ನು ಹರಡಿ. ನಂತರ ಬಿಸ್ಕೆಟ್ ಗಳನ್ನು ಅದರ ಮೇಲೆ ಸಾಲಾಗಿ ಜೋಡಿಸಿ. ಪುನಃ ಮಿಶ್ರಣವನ್ನು ಅದರ ಮೇಲೆ ಹರಡಿ.ಈ ರೀತಿ ಇನ್ನೊಂದು ಬಾರಿ ಪುನರಾವರ್ತಿಸಿ.ಅದರ ಮೇಲೆ ಜಾಮ್, ದ್ರಾಕ್ಷೆ ಮತ್ತು ಗೋಡಂಬಿಯನ್ನು ನಿಮ್ಮಿಚ್ಹೆಯಂತೆ ಅಲಂಕರಿಸಿ. ಅರ್ಧ ತಾಸು ಫ್ರೀಜರ್ ನಲ್ಲಿಡಿ. ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ. ರುಚಿಕರ ಫ್ರಿಜ್ ಕೇಕ್ ಸಿದ್ಧ.